Lyrics: K Kalyan Music: Megha RB *ಪಲ್ಲವಿ* :--
ಪರಿಚಯವಾಗುವ ತುಸು ಮೊದಲೇ ಪರಿಪರಿಯಾಗಿ ಪ್ರೀತಿಸಬೇಕು। ಪಕ್ಕದಲ್ಲಿದ್ದರೂ ದೂರವೇ ಇದ್ದರೂ.. ಕಾಡಿ ಬೇಡಿ ಕಾಡಿಸಬೇಕು॥ ನಿನ್ನೊಳಗಿರುವ ನನ್ನ ವಿಳಾಸ ನನಗೂ ಕೂಡ ತಿಳಿಯದ ಹಾಗೆ ಕ್ಷಣ ಕ್ಷಣ ನಿನ್ನನ್ನು ಹುಡುಕುತಲಿರಬೇಕು..॥ಪ॥
*ಚರಣ* :--
ರೆಪ್ಪೆಗಳಲ್ಲಿ ಕಳೆದು ಹೋಗಿರೋ ಕನಸಿಗೆ ಬಂತೇನು ರೆಕ್ಕೆಗಳು? ನಾವುಗಳಿತ್ತ ಒಂದೊಂದು ಮುತ್ತು ಬಾನ ಬೀದಿಯಲಿ ಚುಕ್ಕೆಗಳು। ಕಾಲುಗಳಿಲ್ಲದ ಕಲ್ಪನೆಯು ಓಟದ ಸ್ಪರ್ಧೆಯ ಗೆದ್ದಂತೆ.. ಸಾಲುಗಳನ್ನು ಬರೆಯುತ ಹೋದೆ.. ಎಲ್ಲಿದ್ದರೂ ಜೊತೆ ನೀ ಇದ್ದಂತೆ॥ ಉಪಚರಿಸೋ ಉಪಕಾರಿ ಈ ರೀತಿ ಒಂದೇನೇ..॥ಪ॥