Lyrics: Venkatesh P Marakdini
Music: Nazeeb Billu
ಮದಿರೆ ಕಣ್ಣ ಎದೆಯ ಗುರಿಗೆ
ಹೆದರಿ ಬಿತ್ತು ಜೀವ ಹೊರಗೆ
ನೆನಪಾಗಿಹೆ ಸುಮ್ಮನೆ
ಆವರಿಸಿದೆ ನನ್ನನೇ
ನೀ ಬೇಕು ಹೃದಯಕೆ
ಬಿಡುವಿಲ್ಲದೆ ನನ್ನ ಇನಿಯಾ
ಬರಿ ಮುತ್ತಲೆ
ಬರೆಯುವೆಯಾ
ದಿನಚರಿಯಾ
ಮತ್ತೇನಿದೆ ಬೇಡಿಕೆ
ಆಹ್ವಾನವು ಸನಿಹಕೆ
ತುತ್ತಾಗಿದೆ ಪ್ರಾಣವು
ಸಿಹಿಗಾಯದ ಪ್ರಣಯಕೆ
ದುಡಿಯುವ ನಿದಿರೆ
ನೆನಪನು ಗಳಿಸಿ
ಕೊಡುತಿದೆ ನನಗೆ
ನಿನ್ನನೇ
ಚೆಲುವನು ಗುಣಿಸಿ
ಒಲವನು ಕೂಡಲು
ಮೂಡುವೆ ಬರೀ ನೀನೆ